...
 1. ಕರ್ನಾಟಕದ 7 ಅದ್ಭುತಗಳ ಆಯ್ಕೆ ಪ್ರಕ್ರಿಯೆಯು 5 ಹಂತಗಳಲ್ಲಿ ನಡೆದಿದೆ.
 2. 1ನೇ ಹಂತದಲ್ಲಿ ಕರ್ನಾಟಕದ ಅದ್ಭುತಗಳನ್ನು ನಾಮನಿರ್ದೇಶನ ಮಾಡಲು ಸಾರ್ವಜನಿಕರಿಗೆ 3೦ ದಿನಗಳ ಸಮಯಾವಕಾಶ ನೀಡಲಾಗಿತ್ತು.
 3. ಸಾರ್ವಜನಿಕರು www.7wondersofkarnataka.com ಗೆ ಭೇಟಿ ನೀಡಿ ರಾಜ್ಯದ ಅದ್ಭುತಗಳಲ್ಲಿ ತಮ್ಮ ಆಯ್ಕೆಯ ಒಂದು ಅದ್ಭುತ ತಾಣದ ಫೋಟೋ ಸಮೇತ ವಿವರ ಭರ್ತಿ ಮಾಡಿ ನಾಮನಿರ್ದೇಶನ ಮಾಡಲು ಅವಕಾಶ ನೀಡಲಾಗಿತ್ತು.
 4. 2ನೇ ಹಂತ ವೋಟಿಂಗ್ ಪ್ರಕ್ರಿಯೆಯಾಗಿತ್ತು. ನಾಮನಿರ್ದೇಶನವಾಗಿರುವ ಅದ್ಭುತಗಳಲ್ಲಿ, ತಜ್ಞರ ಸ್ಥಶ ಪರಿಶೀಲನೆಯ ನಂತರ, ಅತ್ಯದ್ಭುತ ಎನಿಸುವ 1೦೦ ಅದ್ಭುತಗಳನ್ನು ಆಯ್ಕೆ ಮಾಡಿ ವೆಬ್‌ಸೈಟ್‌ನಲ್ಲಿ ವೋಟಿಂಗ್ ಪ್ರಕ್ರಿಯೆಗೆ ಅನುವು ಮಾಡಲಾಗಿತ್ತು. ಮತದಾರರಿಗೆ ತಮ್ಮ ನೆಚ್ಚಿನ ಅದ್ಭುತಕ್ಕೆ ವೋಟ್ ಮಾಡಲು 3೦ ದಿನಗಳವರೆಗೆ ಅವಕಾಶ ನೀಡಲಾಗಿತ್ತು.
 5. 3ನೇ ಹಂತದಲ್ಲಿ ಮತಗಳ ಆಧಾರದ ಮೇಲೆ ಟಾಪ್ 49 ಅದ್ಭುತಗಳನ್ನು ಆಯ್ಕೆ ಮಾಡಿ ಇನ್ನೊಮ್ಮೆ ವೆಬ್‌ಸೈಟ್‌ನಲ್ಲಿ ವೋಟಿಂಗ್ ಪ್ರಕ್ರಿಯೆ ನಡೆಸಲಾಗಿತ್ತು.
 6. 4ನೇ ಹಂತದಲ್ಲಿ, 49 ಅದ್ಭುತಗಳಿಗೆ ವೋಟಿಂಗ್ ಮುಗಿದ ನಂತರ 21 ಅದ್ಭುತಗಳನ್ನು ಆಯ್ಕೆ ಮಾಡಲಾಯಿತು. ಹಾಗೂ ತಜ್ಞರ ಸಮಿತಿಯು ಈ ಎಲ್ಲಾ ಕ್ಷೇತ್ರ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿತು.
 7. 5 ಹಂತದಲ್ಲಿ, ಉನ್ನತ ಮಟ್ಟದ ತೀರ್ಪುಗಾರರ ಸಮಿತಿಯು 21 ಅದ್ಭುತಗಳನ್ನು ಈ ಕೆಳಕಂಡ ಆಧಾರದ ಮೇಲೆ ಆಯ್ಕೆ ಮಾಡಿ ಕರ್ನಾಟಕದ 7 ಅದ್ಭುತಗಳನ್ನು ಅಂತಿಮಗೊಳಿಸಿತು.
  1. ಐತಿಹಾಸಿಕ ಮಾನದಂಡ
  2. ನಿರ್ಮಾಣ ಹಾಗೂ ವಸ್ತುಗಳ ಬಳಕೆ ಆಧಾರ
  3. ರಾಜ್ಯವನ್ನು ಪ್ರತಿನಿಧಿಸುವ ಮಾನದಂಡ
  4. ಭಿನ್ನತೆ/ವೈಶಿಷ್ಟ್ಯತೆ ಮತ್ತು ಮಹಾನತೆ ಆಧಾರ
  5. ಸೌಂದರ್ಯದ ಆಧಾರ
  6. ಅಗಾಧತೆಯ ಆಧಾರ
  7. ನಿರ್ವಹಣೆ ಮಾನದಂಡ
 8. ಅಭಿಯಾನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು www.7wondersofkarnataka.com , ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದಿನಪತ್ರಿಕೆ ಮೂಲಕ ನೀಡಲಾಗಿತ್ತು.