...

ಬೆಳಗ್ಗೆ ಕಣ್ಣು ಬಿಟ್ಟಾಗಿಂದ ರಾತ್ರಿ ಮಲಗೋವರೆಗೂ ಲಕ್ಷಾಂತರ ದೃಶ್ಯಗಳನ್ನು ನಮ್ಮ ಕಣ್ಣುಗಳ ಮೂಲಕ ಸೆರೆ ಹಿಡಿಯುತ್ತೇವೆ. ಈ ಎಲ್ಲಾ ದೃಶ್ಯಗಳ ನಡುವೆ ಒಂದು ದೃಶ್ಯ ನಮ್ಮ ಮಧ್ಯೆ ಉಳಿದುಬಿಡುತ್ತದೆ. ಯಾವಾಗ ಈ ದೃಶ್ಯದ ಯೋಚನೆ ಮಾಡಿದರೂ ನಮಗೆ ಖುಷಿಯಾಗುತ್ತದೆ. ನಮ್ಮಲ್ಲೊಂದು ಹಿತವಾದ ಭಾವನೆ ಮೂಡುತ್ತದೆ. ಎ ಥಿಂಗ್ ಆಫ್ ಬ್ಯೂಟಿ ಈಸ್ ಜಾಯ್ ಫಾರ್ ಎವರ್ ಅನ್ನುತ್ತಾರಲ್ಲಾ ಆ ರೀತಿ.

ಆ ರೀತಿ ನಿಮಗೆ ಖುಷಿ ಕೊಟ್ಟಿರುವಂಥ ಅದ್ಭುತ ದೃಶ್ಯಗಳನ್ನು ಜಗತ್ತಿಗೆ ಪರಿಚಯ ಮಾಡುವ ಅಭಿಯಾನವೊಂದನ್ನು ‘ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್’ ಆರಂಭಿಸಿದೆ. ಕರ್ನಾಟಕದ ೭ ಅದ್ಭುತವನ್ನು ನಾವು ಹುಡುಕುತ್ತಿದ್ದೇವೆ. ನೀವು ಜೊತೆಗಿರಬೇಕು, ನಿಮಗೆ ಸಿಕ್ಕಂತಹ ಅದೇ ಖುಷಿಯನ್ನು ಜಗತ್ತಿಗೆ ಹಂಚೋಣ.

ಅವು ನೈಸರ್ಗಿಕ ಅದ್ಭುತವಾಗಿರಬಹುದು, ಪಾರಂಪರಿಕ ತಾಣವಾಗಿರಬಹುದು, ಮಾನವ ನಿರ್ಮಿತ ವಿಸ್ಮಯಗಳಾಗಿರಬಹುದು, ಬೆರಗು ಹುಟ್ಟಿಸುವ ಗತವೈಭವದ ಕುರುಹು ಕೂಡ ಆಗಿರಬಹುದು, ಇನ್ನೂ ಜಗತ್ತಿಗೆ ಪರಿಚಯವಾಗದಂತಹ ನಿಮ್ಮೂರಿನ ಅದ್ಭುತ ತಾಣವಿರಬಹುದು. ಅಂಥ ಅದ್ಭುತವೊಂದು ನಿಮಗೆ ಗೊತ್ತಿದ್ದರೆ ಈ ಅಭಿಯಾನದಲ್ಲಿ ಭಾಗವಹಿಸಬಹುದು. ನಿಮ್ಮ ಪಾಲಿನ ಕರ್ನಾಟಕದ ಅದ್ಭುತವನ್ನು ನಾಮಿನೇಟ್ ಮಾಡಬಹುದು. ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ನೀವು ಸೂಚಿಸಿರುವ ಅದ್ಭುತವೂ ಒಂದಾಗಿರಬಹುದು.

ಬನ್ನಿ, ಇವು ಕರ್ನಾಟಕದ ೭ ಅದ್ಭುತಗಳ ಪಟ್ಟಿ ಸೇರುವ ಅರ್ಹತೆಯಿರುವ ಅದ್ಭುತವೊಂದನ್ನು ನಮಗೆ ತಿಳಿಸಿ. ನಾವೆಲ್ಲ ಸೇರಿ ಕರ್ನಾಟಕದ ಏಳು ಅದ್ಭುತಗಳನ್ನು ಹುಡುಕೋಣ.

– ರಮೇಶ್ ಅರವಿಂದ್, ನಟ