ಒಂದು ರಾಜ್ಯ.. ಹಲವು ಜಗತ್ತು. ಅದು ಕರ್ನಾಟಕದ ಹೆಗ್ಗಳಿಕೆ. ಇಲ್ಲಿ ಶಿಲ್ಪಕಲಾ ವೈಭವದಿಂದ ಪ್ರಕೃತಿ ನಿರ್ಮಿತ ತಾಣಗಳ ತನಕ, ಪಾರಂಪರಿಕ ಕಟ್ಟಡಗಳಿಂದ ಹಿಡಿದು ನಿಸರ್ಗದ ವಿಸ್ಮಯಗಳ ತನಕ, ಸುಂದರ ಕರಾವಳಿಯಿಂದ ದುರ್ಗಮ ಕಾನನದ ತನಕ, ಮಾನವ ನಿರ್ಮಿತ ಅಚ್ಚರಿಗಳಿಂದ ಜಲಪಾತಗಳ ತನಕ ರಮಣೀಯ ಪ್ರೇಕ್ಷಣೀಯ ತಾಣಗಳು ನೂರಾರು. ಕನ್ನಡದ ನೆಲದುದ್ದಕ್ಕೂ ಹಬ್ಬಿರುವ ಇಂಥ ಅದ್ಭುತ ರಮ್ಯ ತಾಣಗಳು ಪ್ರವಾಸಿಗರ ಸ್ವರ್ಗ. ಗಿರಿಧಾಮಗಳಾದ ಚಿಕ್ಕಮಗಳೂರು, ಕೊಡಗು, ಕಾಡು, ಬೆಟ್ಟಗಳು ಕಂಗೊಳಿಸುವ ಉತ್ತರ ಕನ್ನಡ, ಕಪ್ಪುಮಣ್ಣಿನ ಫಲವತ್ತತೆ ಮತ್ತು ಹಬ್ಬಿದ ಬಯಲು ಕಣ್ತುಂಬುವ ಉತ್ತರ ಕರ್ನಾಟಕ, ಗತವೈಭವ ಸಾರುವ ಹಂಪೆ, ಶರಾವತಿಯ ನಿತ್ಯೋತ್ಸವ, ಮೈಸೂರು ಅರಮನೆಯ ಮಹೋತ್ಸವ, ಕಡಲ ತೀರದ ಪ್ರಭಾವಳಿಗಳಿಂದ ಕನ್ನಡ ನಾಡು ಸಂಪನ್ನ.

ಈ ಎಲ್ಲಾ ತಾಣಗಳೂ ವಿಶ್ವದ ಏಳು ಅದ್ಭುತಗಳ ಸಾಲಲ್ಲಿ ನಿಲ್ಲುವಂಥವು. ಅವುಗಳನ್ನು ಗುರುತಿಸುವ ಅಭಿಯಾನವನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್ ಆರಂಭಿಸುತ್ತಿದೆ. ನಮ್ಮ ಕನ್ನಡನಾಡಿನ ಏಳು ಅದ್ಭುತಗಳನ್ನು ಹುಡುಕಿ, ಗುರುತಿಸಿ, ಅವುಗಳನ್ನು ಜಗತ್ತಿನ ಮುಂದಿಡುವ ಕಾರ್ಯ ಇದೀಗ ಆರಂಭವಾಗಿದೆ. ಈ ಅಭಿಯಾನದ ಹೆಸರೇ ೭ ವಂಡರ್ಸ್ ಆಫ್ ಕರ್ನಾಟಕ, ಕರ್ನಾಟಕದ ಏಳು ಅದ್ಭುತಗಳು.

ಚೀನಾದ ಮಹಾಗೋಡೆಯಿಂದ ಭಾರತದ ತಾಜಮಹಲಿನ ತನಕ ವಿಶ್ವದ ಏಳು ಅದ್ಭುತಗಳು ನಮ್ಮ ಮುಂದಿವೆ. ಇದು ಕರ್ನಾಟಕದ ಅದ್ಭುತಗಳನ್ನು ಹುಡುಕುವ, ಗುರುತಿಸುವ ಸಮಯ. ಈ ಅಭಿಯಾನದಲ್ಲಿ ಕೈ ಜೋಡಿಸಿ. ನಿಮ್ಮೂರಿನ ನಿಮ್ಮ ಜಿಲ್ಲೆಯ ನಿಮ್ಮ ತಾಲೂಕಿನ ಅದ್ಭುತಗಳನ್ನು ಹುಡುಕಿ. ಈ ಅಭಿಯಾನದಲ್ಲಿ ಭಾಗವಹಿಸಿ.

ಬೆಳಗ್ಗೆ ಕಣ್ಣು ಬಿಟ್ಟಾಗಿಂದ ರಾತ್ರಿ ಮಲಗೋವರೆಗೂ ಲಕ್ಷಾಂತರ ದೃಶ್ಯಗಳನ್ನು ನಮ್ಮ ಕಣ್ಣುಗಳ ಮೂಲಕ ಸೆರೆ ಹಿಡಿಯುತ್ತೇವೆ. ಈ ಎಲ್ಲಾ ದೃಶ್ಯಗಳ ನಡುವೆ ಒಂದು ದೃಶ್ಯ ನಮ್ಮ ಮಧ್ಯೆ ಉಳಿದುಬಿಡುತ್ತದೆ. ಯಾವಾಗ ಈ ದೃಶ್ಯದ ಯೋಚನೆ ಮಾಡಿದರೂ ನಮಗೆ ಖುಷಿಯಾಗುತ್ತದೆ. ನಮ್ಮಲ್ಲೊಂದು ಹಿತವಾದ ಭಾವನೆ ಮೂಡುತ್ತದೆ. ಎ ಥಿಂಗ್ ಆಫ್ ಬ್ಯೂಟಿ ಈಸ್ ಜಾಯ್ ಫಾರ್ ಎವರ್ ಅನ್ನುತ್ತಾರಲ್ಲಾ ಆ ರೀತಿ.

ಆ ರೀತಿ ನಿಮಗೆ ಖುಷಿ ಕೊಟ್ಟಿರುವಂಥ ಅದ್ಭುತ ದೃಶ್ಯಗಳನ್ನು ಜಗತ್ತಿಗೆ ಪರಿಚಯ ಮಾಡುವ ಅಭಿಯಾನವೊಂದನ್ನು ‘ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್’ ಆರಂಭಿಸಿದೆ. ಕರ್ನಾಟಕದ ೭ ಅದ್ಭುತವನ್ನು ನಾವು ಹುಡುಕುತ್ತಿದ್ದೇವೆ. ನೀವು ಜೊತೆಗಿರಬೇಕು, ನಿಮಗೆ ಸಿಕ್ಕಂತಹ ಅದೇ ಖುಷಿಯನ್ನು ಜಗತ್ತಿಗೆ ಹಂಚೋಣ.

ಅವು ನೈಸರ್ಗಿಕ ಅದ್ಭುತವಾಗಿರಬಹುದು, ಪಾರಂಪರಿಕ ತಾಣವಾಗಿರಬಹುದು, ಮಾನವ ನಿರ್ಮಿತ ವಿಸ್ಮಯಗಳಾಗಿರಬಹುದು, ಬೆರಗು ಹುಟ್ಟಿಸುವ ಗತವೈಭವದ ಕುರುಹು ಕೂಡ ಆಗಿರಬಹುದು, ಇನ್ನೂ ಜಗತ್ತಿಗೆ ಪರಿಚಯವಾಗದಂತಹ ನಿಮ್ಮೂರಿನ ಅದ್ಭುತ ತಾಣವಿರಬಹುದು. ಅಂಥ ಅದ್ಭುತವೊಂದು ನಿಮಗೆ ಗೊತ್ತಿದ್ದರೆ ಈ ಅಭಿಯಾನದಲ್ಲಿ ಭಾಗವಹಿಸಬಹುದು. ನಿಮ್ಮ ಪಾಲಿನ ಕರ್ನಾಟಕದ ಅದ್ಭುತವನ್ನು ನಾಮಿನೇಟ್ ಮಾಡಬಹುದು. ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ನೀವು ಸೂಚಿಸಿರುವ ಅದ್ಭುತವೂ ಒಂದಾಗಿರಬಹುದು.

ಬನ್ನಿ, ಇವು ಕರ್ನಾಟಕದ ೭ ಅದ್ಭುತಗಳ ಪಟ್ಟಿ ಸೇರುವ ಅರ್ಹತೆಯಿರುವ ಅದ್ಭುತವೊಂದನ್ನು ನಮಗೆ ತಿಳಿಸಿ. ನಾವೆಲ್ಲ ಸೇರಿ ಕರ್ನಾಟಕದ ಏಳು ಅದ್ಭುತಗಳನ್ನು ಹುಡುಕೋಣ.

– ರಮೇಶ್ ಅರವಿಂದ್, ನಟ

 1. ಕರ್ನಾಟಕದ 7 ಅದ್ಭುತಗಳ ಆಯ್ಕೆ ಪ್ರಕ್ರಿಯೆಯು 3 ಹಂತಗಳಲ್ಲಿ ನಡೆಯಲಿದೆ.
 2. ಮೊದಲನೇ ಹಂತದಲ್ಲಿ ಕರ್ನಾಟಕದ ಅದ್ಭುತಗಳನ್ನು ನಾಮನಿರ್ದೇಶನ ಮಾಡಲು ಸಾರ್ವಜನಿಕರಿಗೆ 30 ದಿನಗಳ ಸಮಯಾವಕಾಶ ನೀಡಲಾಗುವುದು.
  1. ಸಾರ್ವಜನಿಕರು www.7wondersofkarnataka.com ಗೆ ಭೇಟಿ ನೀಡಿ ರಾಜ್ಯದ ಅದ್ಭುತಗಳಲ್ಲಿ ತಮ್ಮ ಆಯ್ಕೆಯ ಒಂದು ಅದ್ಭುತ ತಾಣದ ಫೋಟೋ ಸಮೇತ ವಿವರ ಭರ್ತಿ ಮಾಡಿ ನಾಮನಿರ್ದೇಶನ ಮಾಡಬಹುದು.
  2. ಎರಡನೇ ಹಂತ ವೋಟಿಂಗ್ ಪ್ರಕ್ರಿಯೆಯಾಗಿರುತ್ತದೆ. ನಾಮನಿರ್ದೇಶನವಾಗಿರುವ ಅದ್ಭುತಗಳಲ್ಲಿ ಅತ್ಯದ್ಭುತ ಎನಿಸುವ 100 ಅದ್ಭುತಗಳನ್ನು ಆಯ್ಕೆ ಮಾಡಿ ವೆಬ್ಸೈಟ್ನಲ್ಲಿ ವೋಟಿಂಗ್ ಪ್ರಕ್ರಿಯೆಗೆ ಅನುವು ಮಾಡಲಾಗುತ್ತದೆ. ಮತದಾರರಿಗೆ ತಮ್ಮ ನೆಚ್ಚಿನ ಅದ್ಭುತಕ್ಕೆ ವೋಟ್ ಮಾಡಲು 30 ದಿನಗಳವರೆಗೆ ಅವಕಾಶ ನೀಡಲಾಗುತ್ತದೆ.
  3. ಮೂರನೇ ಹಂತದಲ್ಲಿ ಮತಗಳ ಆಧಾರದ ಮೇಲೆ ಟಾಪ್ 49 ಅದ್ಭುತಗಳನ್ನು ಆಯ್ಕೆ ಮಾಡಿ ಇನ್ನೊಮ್ಮೆ ವೆಬ್ಸೈಟ್ನಲ್ಲಿ ವೋಟಿಂಗ್ ಪ್ರಕ್ರಿಯೆ ನಡೆಸಲಾಗುತ್ತದೆ.
  4. 49 ಅದ್ಭುತಗಳಿಗೆ ವೋಟಿಂಗ್ ಮುಗಿದ ನಂತರ 21 ಅದ್ಭುತಗಳನ್ನು ಆಯ್ಕೆ ಮಾಡಲಾಗುವುದು
  5. ಉನ್ನತ ಮಟ್ಟದ ತೀರ್ಪುಗಾರರ ಸಮಿತಿಯು 21 ಅದ್ಭುತಗಳನ್ನು ಈ ಕೆಳಕಂಡ ಆಧಾರದ ಮೇಲೆ ಆಯ್ಕೆ ಮಾಡಿ ಕರ್ನಾಟಕದ 7 ಅದ್ಭುತಗಳನ್ನು ಅಂತಿಮಗೊಳಿಸಲಾಗುವುದು.
   1. ಐತಿಹಾಸಿಕ ಮಾನದಂಡ
   2. ನಿರ್ಮಾಣ ಹಾಗೂ ವಸ್ತುಗಳ ಬಳಕೆ ಆಧಾರ
   3. ರಾಜ್ಯವನ್ನು ಪ್ರತಿನಿಧಿಸುವ ಮಾನದಂಡ
   4. ಭಿನ್ನತೆ/ವೈಶಿಷ್ಟ್ಯತೆ ಮತ್ತು ಮಹಾನತೆ ಆಧಾರ
   5. ಸೌಂದರ್ಯ ಮತ್ತು....ಆಧಾರ
   6. ಅಗಾಧತೆಯ ಆಧಾರ
   7. ನಿರ್ವಹಣೆ ಮಾನದಂಡ
  6. ಅಭಿಯಾನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು www.7wondersofkarnataka.com , ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದಿನಪತ್ರಿಕೆ ಮೂಲಕ ನೀಡಲಾಗುವುದು
ಏಷ್ಯಾನೆಟ್ ಸುವರ್ಣನ್ಯೂಸ್

ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಏಷ್ಯಾನೆಟ್ ಸುವರ್ಣನ್ಯೂಸ್ ನೇರ-ದಿಟ್ಟ-ನಿರಂತರ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಕರ್ನಾಟಕದ ಅತ್ಯಂತ ಪ್ರಭಾವಿ ಹಾಗೂ ಜವಾಬ್ದಾರಿಯುತ ಮಾಧ್ಯಮ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಂಡಿದೆ. ಪಕ್ಷಾತೀತವಾಗಿ, ಜನಪರವಾಗಿ ಸುದ್ದಿಗಳನ್ನು ಬಿತ್ತರಿಸುತ್ತಾ ಶ್ರೀಸಾಮಾನ್ಯರ ವಿಶ್ವಾಸದೊಂದಿಗೆ 14 ವರ್ಷಗಳ ಯಶಸ್ವಿ ಪಯಣವನ್ನು ಪೂರ್ಣಗೊಳಿಸಿದೆ. ಅಸಹಾಯಕರಿಗೆ ಧ್ವನಿಯಾಗಿ, ಸಂತ್ರಸ್ತರಿಗೆ ನೆರವಾಗಿ, ಸಂಕಷ್ಟದಲ್ಲಿರುವವರಿಗೆ ಸಾಥ್ ನೀಡುವ ಮೂಲಕ ಮಾನವೀಯತೆ ಮೆರೆದ ನಂಬಿಕಾರ್ಹ ಮಾಧ್ಯಮ ಸಂಸ್ಥೆ ಎಂಬ ಹಿರಿಮೆಯೊಂದಿಗೆ ಹೆಜ್ಜೆಹಾಕುತ್ತಿದೆ ಏಷ್ಯಾನೆಟ್ ಸುವರ್ಣನ್ಯೂಸ್.

ಕನ್ನಡಪ್ರಭ ದಿನಪತ್ರಿಕೆ

54 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕದ ನೆಚ್ಚಿನ ಪ್ರಭಾವಿ ಹಾಗೂ ವಿಶ್ವಾಸಾರ್ಹ ಪತ್ರಿಕೆ "ಕನ್ನಡಪ್ರಭ ದಿನಪತ್ರಿಕೆ". ಪತ್ರಿಕೋದ್ಯಮದ ಮೌಲ್ಯಗಳನ್ನು ಅನುಸರಿಸುತ್ತಾ ನೇರ, ನಿಖರ, ಸವಿವರದೊಂದಿಗೆ ವಿಚಾರಾತ್ಮಕ, ವಿಶ್ಲೇಷಣಾತ್ಮಕ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ. ಕನ್ನಡ ಪತ್ರಿಕೋದ್ಯಮ ವಲಯದಲ್ಲಿ ವಿನೂತನ ಪ್ರಯತ್ನಗಳಿಗೆ ಮುನ್ನುಡಿ ಬರೆಯುವುದರ ಜೊತೆಗೆ ಹಲವು ಪ್ರಥಮಗಳಿಗೆ ನಾಂದಿ ಹಾಡಿದ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜನವಿರೋಧಿ ಕಾಯ್ದೆ ಜಾರಿಗೊಂಡಾಗ ಜನಪರ ನಿಲುವು ತಾಳುವ ಮೂಲಕ ಶ್ರೀಸಾಮಾನ್ಯರ ವಿಶ್ವಾಸವನ್ನು ಗಳಿಸುತ್ತಾ ವಜ್ರಮಹೋತ್ಸವದತ್ತ ದಾಪುಗಾಲು ಹಾಕುತ್ತಿದೆ ಕನ್ನಡಪ್ರಭ ದಿನಪತ್ರಿಕೆ.